ಗರ್ಡಾಡಿ: ಇಲ್ಲಿಯ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ಬೈಕ್ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗೆ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಪ್ಪಿನಂಗಡಿ ಬಳಿಯ ಹಿರೇಬಂಡಾಡಿಯ ಇಬ್ಬರು ಸಹೋದರರು ಮೃತಪಟ್ಟ ಘಟನೆ ಮಾ.18ರಂದು ಸಂಜೆ ಸಂಭವಿಸಿದೆ.
ಹೀರೆಬಂಡಾಡಿ ಗ್ರಾಮದ ನಿವೃತ್ತ ಶಿಕ್ಷಕ ಅಬ್ದುಲ್‌ರಜಾಕ್ ಅವರ ಪುತ್ರರಾದ ಅಹಮ್ಮಬ್ಬ ಸಿರಾಜ್ ಮತ್ತು ಸಾಧಿಕ್ ಈ ದುರ್ಘಟನೆಯಲ್ಲಿ ಮೃತಪಟ್ಟವರು. ಇವರಿಬ್ಬರು ಹೊಸಂಗಡಿ ಸಮೀಪದ ತಮ್ಮ ನಾಲ್ಕು ವರ್ಷ ಪ್ರಾಯದ ಅಣ್ಣನ ಮಗನ ಶವ ಸಂಸ್ಕಾರಕ್ಕೆ ಬಂದು ಮರಳಿ ಉಪ್ಪಿನಂಗಡಿಯ ಹೀರೆಬಂಡಾಡಿಗೆ ಹೋಗಲು ಬೈಕ್‌ನಲ್ಲಿ ಗರ್ಡಾಡಿ ಬಳಿ ಬರುತ್ತಿರುವ ಸಮಯ ಬೆಳ್ತಂಗಡಿಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡ ಇನ್ನೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವರಿಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಐದು ತಿಂಗಳಿನಿಂದ ಊರಿಗೆ ಮರಳಿದ್ದರೆಂದು ವರದಿಯಾಗಿದೆ.