ಕ್ರೈಂ ವಾರ್ತೆ

ಮದ್ಯ ಸೇವಿಸಿ ಉಜಿರೆ ಮುಂಡತ್ತೋಡಿಯಲ್ಲಿ ಗದಗದ ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ: ವಿಪರೀತ ಮದ್ಯಪಾನ ಮಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊವ೯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.12 ರಂದು ಉಜಿರೆ ಗ್ರಾಮದ ಮುಂಡತ್ತೋಡಿ ಎಂಬಲ್ಲಿ ನಡೆದಿದೆ.
ಗದಗ ಜಿಲ್ಲೆ, ಲಕ್ಷ್ಮೀಶ್ವರ ತಾಲೂಕು,ಸುರಣಿಗಿ ಗ್ರಾಮದ ನಿವಾಸಿ , ಪ್ರಸ್ತುತ ಉಜಿರೆ ಗ್ರಾಮದ ಮುಂಡತ್ತೋಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕರಿಯಪ್ಪ 48 ವರ್ಷ ಆತ್ಮಹತ್ಯೆ ಮಾಡಿಕೊಂಡ ವರು.
ಕರಿಯಪ್ಪ ರವರ ಪತ್ನಿ ಶ್ರೀಮತಿ ದೀಪಾ ಅವರು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತನ್ನ ಗಂಡ ವಿಪರೀತ ಮದ್ಯ ಸೇವಿಸಿ ಮಾನಸಿಕ ಸ್ಥಿಮಿತ ಕಳೆದುಕೊಂಡು ತನಗೆ ಹಾಗೂ ಮಕ್ಕಳಿಗೆ ಹೊಡೆದು ತೊಂದರೆ ನೀಡುತ್ತಿದ್ದರು, ಮಕ್ಕಳಿಗೆ ಹೊಡೆಯುತ್ತಿರುವುದರಿಂದ ತಾನು ಮಕ್ಕಳನ್ನು ಅತ್ತೆಯ ಮನೆಯಾದ ಗದಗ ಜಿಲ್ಲೆಗೆ ಕಳುಹಿಸಿದ್ದೆ . ಮಾ. 11 ರಂದು ರಾತ್ರಿ 11 ಗಂಟೆಗೆ ಎಂದಿನಂತೆ ವಿಪರೀತ ಮದ್ಯ ಸೇವಿಸಿ ಬಂದು ಮಕ್ಕಳನ್ನು ಯಾಕೆ ಕರೆಸಿಲ್ಲ ಎಂದು ಅವಾಚ್ಯವಾಗಿ ಬೈದು ಮನನೊಂದುಕೊಂಡು ಮಲಗುವ ಕೊಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದು, ಮರುದಿನ ಮಾ. 12 ರಂದು ಬೆಳಿಗ್ಗೆ ಬಾಗಿಲು ಬಡಿದು ಕರೆದರು ಯಾವುದೇ ಪ್ರತ್ಯೂತ್ತರ ಬಾರದಿದ್ದಾಗ ಅಕ್ಕಪಕ್ಕದವರನ್ನು, ಮನೆಯ ಮಾಲಿಕರನ್ನು ಹಾಗೂ ಪೊಲೀಸ್ ಕರೆಸಿ ಬಾಗಿಲು ಒಡೆದು ತೆಗೆದು ನೋಡಿದಾಗ ಗಂಡ ಕರಿಯಪ್ಪ ರವರು ಮನೆಯ ಮೇಲ್ಬಾಗದ ಸ್ಲಾಬಿನ ಕಬ್ಬಿಣದ ಕೊಂಡಿಗೆ ನೈಲಾನ್ ಸೀರೆಯಿಂದ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ