ಬೆಳ್ತಂಗಡಿ : ಬೆಳ್ತಂಗಡಿ ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿ ಸಿಂಧೂ (17ವ) ಎಂಬವರು ನಾಪತ್ತೆಯಾಗಿ
ರುದಾಗಿ ವಾರ್ಡನ್ ಶುಭಾನಾಯಕ್
ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಡಿಗೆರೆ ನಿವಾಸಿಯಾಗಿರುವ ಸಿಂಧೂ ನ.17 ರಂದು ಸೇರ್ಪಡೆಗೊಂಡಿದ್ದು, ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದರು. ನ. 24 ರಂದು ಎಂದಿನಂತೆ ಬೆಳಿಗ್ಗೆ 9 ಗಂಟೆಗೆ ಇತರ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿಗೆಂದು ಹೊರಟು ಹೋದವರು ಕಾಲೇಜಿಗೂ ಹೋಗದೆ, ವಾಪಾಸು ವಿದ್ಯಾರ್ಥಿನಿ ನಿಲಯಕ್ಕೂ ಬಾರದೇ ತನ್ನ ಹೆತ್ತವರ ಬಳಿಗೂ ಹೋಗದೇ ಕಾಣೆಯಾಗಿರುವುದಾಗಿ ವಾಡ೯ನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿ ನಾಪತ್ತೆ ಪೊಲೀಸ ದೂರು