ಕ್ರೈಂ ವಾರ್ತೆ

ಹಾಡುಹಗಲೇ ಇಂಬೆಟ್ಟುವಿನ ಮನೆಯಿಂದ ರೂ.5, 200 ನಗದು ಸಹಿತ ರೂ.12.05 ಲಕ್ಷದ ಮೌಲ್ಯದ 40 ಪವನ್ ಚಿನ್ನಾಭರಣ ಕಳವು

ಇಂದಬೆಟ್ಟು: ಮನೆಯಲ್ಲಿ ಯಾರೂ ಇಲ್ಲದ ವಿಷಯವನ್ನು ಖಚಿತಪಡಿಸಿಕೊಂಡ ಕಳ್ಳರು ಹಾಡು ಹಗಲೇ ಮನೆಯೊಂದರಿಂದ 5,200 ನಗದು ಸಹಿತ ರೂ.12,05,200 ಮೌಲ್ಯದ 40 ಪವನ್ ಚಿನ್ನಾಭರಣ ಕಳವು ನಡೆಸಿದ ಘಟನೆ ಅ.31ರಂದು ಇಂದಬೆಟ್ಟು ಗ್ರಾಮದಲ್ಲಿ ನಡೆದಿದೆ.
ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆ ನಿವಾಸಿ ಮಹಮ್ಮದ್ ಎಂಬವರ ಮನೆಯಿಂದ ಈ ಭಾರಿ ಮೊತ್ತದ ಚಿನ್ನಾಭರಣ ಕಳವು ಮಾಡಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಹಮ್ಮದ್ ಅವರು ಕೃಷಿ ಜೊತೆಗೆ ಅಡಿಕೆ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು, ಅ. 31 ರಂದು ಬೆಳಗ್ಗೆ ಮಹಮ್ಮದ್‌ರವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ, ಅವರ ತಮ್ಮ ಸಪ್ವಾನ್ ಎಂವರ ಮದುವೆ ನಿಶ್ಚಿತಾರ್ಥಕ್ಕಾಗಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದರು.
ಮನೆಯಲ್ಲಿ ಮಹಮ್ಮದ್ ಒಬ್ಬರೇ ಇದ್ದು, ಸಂಜೆ ವೇಳೆ ಅವರು ಮನೆಯಲ್ಲಿ ಚಹಾ ತಿಂಡಿ ಮಾಡಿ, ಅಲ್ಲೆ ಹತ್ತಿರದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿರುದ್ದರು. ಸಂಜೆ ಬಂಟ್ವಾಳದ ಉಳಿಗೆ ನಿಶ್ಚಿತಾರ್ಥಕ್ಕೆ ಹೋಗಿದ್ದ ಪತ್ನಿ ವಾಪಾಸ್ಸು ಮನೆಗೆ ಬಂದಾಗ, ಮೊಬೈಲ್ ಅಲ್ಲೇ ಪಕ್ಕದಲ್ಲಿ ಚೇರ್ ಮೇಲೆ ಇರುವುದನ್ನು ಕಂಡು ಗಾಬರಿಯಿಂದ ಕಳವು ಆಗಿರಬಹುದೆಂದು ಮಹಮ್ಮದ್‌ರನ್ನು ಕರೆದು ಗೋದ್ರೇಜ್‌ನ ಬಾಗಿಲು ಸ್ವಲ್ಪ ತೆರೆದಿದ್ದು ಅನುಮಾನಗೊಂಡು ನೋಡಿದಾಗ ಗಾಡ್ರೇಜ್‌ನ ಒಂದು ಲಾಕರ್‌ನಲ್ಲಿ ಇರಿಸಿದ್ದ ಸಣ್ಣ ಸ್ಟೀಲ್ ಬೋಗಣಿಯ ಹತ್ತಿರದಲ್ಲಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿದೆ.
ಗೋದ್ರೇಜ್‌ನಲ್ಲಿದ್ದ 12,00 ರೂ ನಗದು ಮತ್ತು 13 ಪವನ್‌ನ ಒಂದು ಕಾಯಿನ್ ನೆಕ್ಲೆಸ್, 1ಪವನಿನ ಚೈನ್. 1 ಪವನಿನ ಗುಂಡು ಇರುವ ಸಣ್ಣ ಚೈನ್, ಒಂದೂವರೆ ಪವನಿನ ಎರಡು ಮಕ್ಕಳ ಚೈನ್, 4 ಪವನಿನ ಕಾಯಿನ್ಸ್, 16 ಪವನಿನ 4 ಚಿನ್ನದ ಬಿಸ್ಕೆಟ್, ಸುಮಾರು ಒಂದೂವರೆ ಇಂಚು ಉದ್ದದ 2 ಪವನಿನ ಚಿನ್ನದ ಗಟ್ಟಿ, ವಾಚ್ ಆಕಾರದ ಚಿತ್ರವಿರುವ ಅರ್ಧ ಪವನಿನ ಬ್ರಾಸ್ ಲೈಟ್, ಅರ್ಧ ಪವನಿನ ತುಂಡಾದ ಬಳೆ ಮತ್ತು ಪೆಂಡೆಂಟ್, ಅರ್ಧ ಪವನಿನ ಮಗುವಿನ ಕಿವಿ ಓಲೆ ಕಳವಾದ ಸೊತ್ತುಗಳಲ್ಲಿ ಸೇರಿದೆ.
ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ರೂ. 12,05,200ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಹಮ್ಮದ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ