ಲಾಯಿಲ: ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮುಗಿಸಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಬಾಲಕ ನಾಪತ್ತೆಯಾದ ಘಟನೆ ಅ.೨೭ರಂದು ವರದಿಯಾಗಿದೆ.
ಲಾಲ ಗ್ರಾಮದ ಪಡ್ಲಾಡಿ ಮನೆ ನಿವಾಸಿ ಬಾಬು ಎಂಬವರ ಪುತ್ರ ಬಿಪಿನ ( 17ವ) ನಾಪತ್ತೆಯಾದ ಬಾಲಕನಾಗಿದ್ದಾನೆ.
ಅ. 19 ರಂದು ಬೆಳಿಗ್ಗೆ ಸ್ವ-ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದ ಬಿಪಿನ್ ಸಂಜೆಯಾದರೂ ಮನೆಗೆ ವಾಪಾಸ್ಸು ಬಂದಿರಲಿಲ್ಲವೆನ್ನಲಾಗಿದೆ. ಬಳಿಕ ಅ. 21 ರಂದು ಆತನ ತಾಯಿಗೆ ಮೊಬೈಲ್ ಕರೆ ಮಾಡಿ ಮನೆಗೆ ವಾಪಾಸ್ಸು ಬರುವುದಾಗಿ ಹೇಳಿದ್ದನೆನ್ನಲಾಗಿದೆ. ಅ.25 ರಂದು ಆತ ಪುನಃ ತಾಯಿಯ ಫೋನ್ ಕರೆ ಮಾಡಿ ಈ ದಿನ ಸಂಜೆ ಮನೆಗೆ ವಾಪಾಸು ಬರುವುದಾಗಿ ತಿಳಿಸಿ ನಂತರ ನಾಪತ್ತೆಯಾಗಿದ್ದ. ಆತನ ಮೊಬೈಲ್ ಪೋನ್‌ಗೆ ಕರೆ ಮಾಡಿದರೂ ಆತನು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಆತನ ತಂದೆ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.