ಕೊಕ್ಕಡ: ಕೊಕ್ಕಡ ಗ್ರಾಮದ ಪುತ್ತೆ ಯಲ್ಲಿ ವಾಸ್ತವ್ಯವಿರುವಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ
ಘಟನೆ ಅ.18 ರಂದು ಮಧ್ಯಾಹ್ನದ ವೇಳೆ ನಡೆದಿದೆ.
ಕೊಕ್ಕಡ ಗ್ರಾಮದ ಪುತ್ಯೆ ನಿವಾಸಿ ರಾಜೇಶ್ ರವರ ಪತ್ನಿ ರಶ್ಮಿತಾ(28.ವ) ಎಂಬವರೇ ಆತ್ಮಹತ್ಯೆಗೆ ಶರಣಾದವರು.
ರಾಜೇಶ್ ಮತ್ತು ರಶ್ಮಿತಾ ದಂಪತಿ ತಮ್ಮ ಮಗುವಿನೊಂದಿಗೆ ಪುತ್ಯೆಯಲ್ಲಿ ವಾಸ್ತವ್ಯವಿದ್ದರು. ಇಂದು ಮಧ್ಯಾಹ್ನ ರಶ್ಮಿತಾರವರು
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ತಡೆದಿದ್ದಾರೆನ್ನಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕಾಗಿ ಈಕೆ ಕೃತ್ಯವೆಸಗಿರಎಂಬುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.