ಕ್ರೈಂ ವಾರ್ತೆ

ಔಷಧಿಗೆಂದು ಉಪ್ಪಿನಂಗಡಿಗೆ ಹೋದ ಕಳಿಯ ಗ್ರಾಮದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಕಳಿಯ: ಕಳಿಯ ಗ್ರಾಮದ ಪರಪ್ಪು ನಿವಾಸಿಯೋರ್ವರು
ಉಪ್ಪಿನಂಗಡಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18ರಂದು ಬೆಳಿಗ್ಗೆ ನಡೆದಿದೆ.

ಕಳಿಯ ಗ್ರಾಮದ ಪರಪ್ಪು ಸುಣ್ಣಲಡ್ಡ ಮನೆ ನಿವಾಸಿ ಮುತ್ತಪ್ಪ ಶೆಟ್ಟಿ ಎಂಬವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಮುತ್ತಪ್ಪ ಶೆಟ್ಟಿಯವರು ಔಷಧಿ ತರಲೆಂದು ಬೆಳಿಗ್ಗೆ ಗೇರುಕಟ್ಟೆಯಿಂದ ಬಸ್ಸಿನಲ್ಲಿ
ಉಪ್ಪಿನಂಗಡಿಗೆ ಹೋಗಿದ್ದರು. ಬಸ್ಸಿನಿಂದ
ಇಳಿದವರೇ ಉಪ್ಪಿನಂಗಡಿ ನದಿಗೆ ಹಾರಿ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇದರಿಂದ ಮನನೊಂದು ಈ ಕೃತ್ಯವೆಸಗಿರಬಹುದೆಂದು ಅಂದಾಜಿಸಲಾಗಿದೆ.
ಮೃತರು ಪತ್ನಿ ಕಲ್ಯಾಣಿ , ಓರ್ವ ಪುತ್ರ ಸುದರ್ಶನ, ಮೂವರು ಪುತ್ರಿಯರಾದ ಸುಮಲತಾ, ಸುಜಾತಾ, ಸುನೀತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ