ಕ್ರೈಂ ವಾರ್ತೆ

ಪುಂಜಾಲಕಟ್ಟೆ: ಹೆಡ್ ಕಾಸ್ಟೇಬಲ್ ಮರೋಡಿ ನಿವಾಸಿ ಅಬೂಬಕ್ಕರ್ ಅಪಘಾತದಲ್ಲಿ ಬಲಿ!

ಬೆಳ್ತಂಗಡಿ : ಕರ್ತವ್ಯ ನಿರತ ಪುಂಜಾಲಕಟ್ಟೆ ಪೊಲೀಸ್  ಠಾಣೆಯ ಹೆಡ್ ಕಾನ್ಸಟೇಬಲ್ ಅಬೂಬಕ್ಕರ್(48 ವ)
ಎಂಬವರು ವಾಹನ ಅಪಘಾತದಲ್ಲಿ ಮೃತಪಟ್ಟ ಘಟನೆ ಅ.15 ರಂದು ವರದಿಯಾಗಿದೆ.


ಬಂಟ್ವಾಳ ತಾಲೂಕಿನ ವಾಮದ ಪದವು ನೇರಳ ಕಟ್ಟೆ ಎಂಬಲ್ಲಿ ಇವರ ಬೈಕ್ ಮತ್ತು ಸ್ಕೂ ಟರ್ ನಡುವೆ ನಡೆದ ಅಪಘಾತದಲ್ಲಿ ಅಬೂಬಕ್ಕರ್ ಸ್ಥಳದಲ್ಲೇ ಸಾವನ್ನಪ್ಪಿದರೆಂದು ವರದಿಯಾಗಿದೆ.


ಮರೋಡಿ ಗ್ರಾಮದ ಅಬ್ಸಾಲಿ ಎಂಬವರ ಪುತ್ರರಾದ ಅಬೂಬಕ್ಕರ್ ಬೆಳ್ತಂಗಡಿ, ವೇಣೂರು ಹಾಗೂ ಪುಂಜಾಲಕಟ್ಟೆ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.ಸ್ಕೂಟರ್ ಸವಾರ ಕೈಯಾರ ನಿವಾಸಿ ದುಗಾ೯ಪ್ರಸಾದ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿಮ್ಮದೊಂದು ಉತ್ತರ