ಪುದುವೆಟ್ಟು: ಮನೆಯ ಅಂಗಳದಲ್ಲಿ ನಿಂತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಂಗಳದ ಬದಿಯಲ್ಲಿದ್ದ ಮರ ಬೇರು ಸಹಿತ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ತಲೆಗೆ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅ.13ರಂದು ವರದಿಯಾಗಿದೆ.
ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ ಆದಂ ಸಾಹೇಬ್(೬೧ವ) ಈ ದುರ್ಘಟನೆಯಲಿ ದಾರುಣವಾಗಿ ಮೃತಪಟ್ಟವರಾಗಿದ್ದಾರೆ.
ಘಟನೆ ವಿವರ: ಅ.11ರಂದು ಮಧ್ಯಾಹ್ನ 2 ಗಂಟೆ ಸಮಯಕ್ಕೆ ಆದಂ ಸಾಹೇಬ್ ಅವರು ಮನೆಯ ಮುಂಭಾಗ ಅಂಗಳದಲ್ಲಿ ನಿಂತುಕೊಂಡಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಂಗಳದ ಬದಿಯಲ್ಲಿದ್ದ ಮರ ಬೇರು ಸಮೇತ ಅವರ ಮೇಲೆ ಉರುಳಿ ಬಿದ್ದಿತ್ತೆನ್ನಲಾಗಿದೆ.
ಮರ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಏಟು ತಗಲಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅ.೧೩ ರಂದು ಬೆಳಿಗ್ಗೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಮೃತರ ಪತ್ನಿ ಜೋಹರಾಬಾನು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.