ಕಳಿಯ: ಕೆಲಸದ ನಿಮಿತ್ತ ಅ.10 ರಂದು ಪುತ್ತೂರಿನಲ್ಲಿರುವ ಅತ್ತೆಯ ಮನೆಗೆ ಹೋದ ಕಳಿಯ ಗೇರುಕಟ್ಟೆ ಕಲ್ಲುರ್ಣಿಯ ದಯಾನಂದ ಗೌಡ ಅವರು ವಾರಾಣಾಸಿಯಲ್ಲಿ ಪತ್ತೆಯಾಗಿದ್ದಾರೆ.
ಅವರು ಅ.10ರಂದು ತಮ್ಮ ಪತ್ನಿ ಅನಿತಾರ ತವರು ಮನೆಯಾದ ಪುತ್ತೂರಿನ ಈಶ್ವರಮಂಗಳದ ಕೊಪ್ಪಳ ಎಂಬಲ್ಲಿಗೆ ಅಗತ್ಯ ಕೆಲಸದ ನಿಮಿತ್ತ ಹೋಗಿದ್ದು, ಅಂದು ಸಂಜೆ ಹಿಂದುರುಗಿ ಬಂದ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು.
ಅವರ ಪತ್ನಿ ಅನಿತಾರವರು ಅ.11ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದೀಗ ಅವರು ವಾರಾಣಾಸಿ ಸಮೀಪದ ಝಾನ್ಸಿಯಿಂದ ಮನೆಗೆ ಪೋನ್ ಮಾಡಿದ್ದು, ಮೊಬೈಲ್ ಬಿದ್ದು ಹಾಳಾದ್ದರಿಂದ ಸಂಪರ್ಕಕ್ಕೆ ಸಾಧ್ಯವಾಗಿಲ್ಲ ಝಾನ್ಸಿಯಲ್ಲಿ ರಿಪೇರಿ ಮಾಡಿಸಿ ಪೋನ್ ಮಾಡುತ್ತಿದ್ದೇನೆ. ತಾನು ಉಜ್ಜಯಿನಿ, ಅಯೋಧ್ಯೆಗೆ ಹೋಗಿ ಮುಂದಿನ ಬುಧವಾರ ಅಥವಾ ಗುರುವಾರ ಮನೆಗೆ ಬರುವುದಾಗಿ ತಿಳಿಸಿದ್ದಾರೆ.ಇದರಿಂದಾಗಿ ಮನೆಯವರಲ್ಲಿ ಮೂಡಿದ್ದ ಆತಂಕ ದೂರವಾಗಿದೆ.