ಬೆಳ್ತಂಗಡಿ: ಕರಿಮಣೇಲು
ಕೊಲೆಗೆ ಸಂಬಂಧಿಸಿದಂತೆ ಕೂಡಲೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ಹಾಗೂ ವೇಣೂರು ಠಾಣಾ ಪೊಲೀಸರ ತಂಡ ಸಂಜೀವ ಶೆಟ್ಟಿಯವರನ್ನು ಕೊಲೆಗೈದ ಆರೋಪಿ ಶ್ರೀಶ ಶೆಟ್ಟಿ ಎಂಬವರನ್ನು ಚಾರ್ಮಾಡಿಘಾಟ್ ಬಳಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಸಂಜೀವ ಶೆಟ್ಟಿ(65) ಇವರು ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ನೂಯಿ ಮನೆ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರ ಮನೆಯ ಹತ್ತಿರದಲ್ಲಿ ಇವರ ಅಳಿಯ ಶ್ರೀಷಾ ಎಂಬವನು ಕೂಡಾ ಪ್ರತ್ಯೇಕವಾಗಿ ವಾಸವಾಗಿದ್ದು, ಅವರಿಬ್ಬರಿಗೂ ಜಾಗದ ವಿಚಾರದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು, ನಿನ್ನ ಅ. 07 ರಂದು ರಾತ್ರಿ ಆರೋಪಿ ಶ್ರೀಷಾ ಇವರು ಸಂಜೀವ ಶೆ್ಟ್ಟಿಯವರ ಮನೆಯ ಒಳಗೆ ಬಂದು ಜಗಳ ತೆಗೆದು ಸಂಜೀವ ಶೆಟ್ಟಿಯವರ ಬೆನ್ನಿಗೆ ಮತ್ತು ಕುತ್ತಿಗೆಗೆ ಕತ್ತಿಯಿಂದ ಕಡಿದಾಗ ತೀವ್ರ ಗಾಯ ಗೊಂಡ ಸಂಜೀವ ಶೆಟ್ಟಿಯವರು ತನ್ನ ಮನೆಯ ಒಳಗೆ ಸಾವನ್ನಪ್ಪಿದರು.