ಬೆಳ್ತಂಗಡಿ:ಮೇಲಾಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಿಂದ ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಧರ್ಮಸ್ಥಳದಲ್ಲಿ ಸೆ.7 ರಂದು ಪತ್ತೆಯಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಗಿರಿರಾಜ್ ನಾಪತ್ತೆಯಾಗಿ ಈಗ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿರುವ ವ್ಯಕ್ತಿ. ಸೆ. 28ರಂದು ಇವರು ಸೂಸೈಡ್ ನೋಟ್ ಬರೆದಿಟ್ಟು ನಿಗೂಢವಾಗಿ ಪತ್ತೆಯಾಗಿದ್ದರು. ಇದಾದ ಬಳಿಕ ಗಿರಿರಾಜ್ ಪತ್ನಿ ಜ್ಯೋತಿ, ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಗಿರಿರಾಜ್ ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್
ಇಲಾಖೆ ಸಾಕಷ್ಟು ಶೋಧ ಕಾರ್ಯ ನಡೆಸಿತ್ತು. ಆದಾಗ್ಯೂ ಗಿರಿರಾಜ್ ಪತ್ತೆಯಾಗಿರಲಿಲ್ಲ. ಇದೀಗ ನಾಪತ್ತೆಯಾದ 10 ದಿನಗಳ ಬಳಿಕ
ಗಿರಿರಾಜ್ ಅಸ್ವಸ್ಥ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.
ಆಸ್ಪತ್ರೆಗೆ ದಾಖಲು: ಗಿರಿರಾಜ್ ಅ.
7 ರಂದು ರಾತ್ರಿ ಧರ್ಮಸ್ಥಳ ದಲ್ಲಿ ಪತ್ತೆ ಯಾಗಿದ್ಧು, ಇವರನ್ನು ಸರಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಷಡಕ್ಷರಿ ಯವರ ಸಲಹೆ ಸೂಚನೆಯಂತೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರ ವಿಶೇಷ ಸಹಕಾರದೊಂದಿಗೆ
ಎಸ್.ಡಿ.ಎಂಆಸ್ಪತ್ರೆ ಉಜಿರೆಗೆ ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಜಯಕೀರ್ತಿ ಜೈನ್ ಅವರು ದಾಖಲಿಸಿ ದರು. ಶಿವಮೊಗ್ಗ ದ ಅವರ ಇಲಾಖೆಯ ಅಧಿಕಾರಿಗಳು ಹಾಗೂ ಮನೆಯವರು ಆಸ್ಪತ್ರೆಗೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಸಹಕರಿಸಿದ ಎಲ್ಲರಿಗೂ ಜಯಕೀತಿ ಜೈನ್ ಧನ್ಯವಾದ ಸಲ್ಲಿಸಿದ್ದಾರೆ.
ಗಿರಿರಾಜ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿರುವ ಡೆತ್ನೋಟ್‌ನಲ್ಲಿ ಮೇಲಧಿಕಾರಿಗಳ ಕಿರುಕುಳದ ಕುರಿತು ಉಲ್ಲೇಖವಿದೆ ಎನ್ನನಲಾಗುತ್ತಿದೆಅವರ ನಾಪತ್ತೆ ಪ್ರಕರಣ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿವರ್ಗದಲ್ಲಿ
ಆತಂಕಕ್ಕೆ ಕಾರಣವಾಗಿತ್ತು.