ಬೆಳ್ತಂಗಡಿ: ಖಿನ್ನತೆಗೊಳಗಾಗಿದ್ದ 22 ವರ್ಷದ ಎಂ.ಕಾಂ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯ ಹುಣ್ಣೆಕಟ್ಟೆ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಹುಣ್ಣೆಕಟ್ಟೆ ನಿವಾಸಿ ಸಂಜೀವ ಶೆಟ್ಟಿ ಮತ್ತು ಜಯಂತಿ ದಂಪತಿಗಳ ಪುತ್ರಿ ದೀಕ್ಷಾ(22) ಮೃತ ಯುವತಿ.
ಸದ್ಯದ ಮಾಹಿತಿ ಪ್ರಕಾರ, ಖಿನ್ನತೆಗೊಳಗಾಗಿರುವ ಕಾರಣ ಆಕೆ ಈ ಕೃತ್ಯ ಎಸಗಿದರೆನ್ನಲಾಗಿದೆ.
ದೀಕ್ಷಾ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿಯಾಗಿದ್ದಾರೆ.