ಕ್ರೈಂ ವಾರ್ತೆ

ಮದ್ದಡ್ಕದಲ್ಲಿ 1.5 ಕೆ.ಜಿ ಗಾಂಜಾ ಸಹಿತ ಇಬ್ಬರ ವಶ

ಬೆಳ್ತಂಗಡಿ: ಮದ್ದಡ್ಕ ಸಮೀಪದ ಸಬರಬೈಲು ಎಂಬಲ್ಲಿ ಯುವಕರಿಬ್ಬರು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 1.310 ಕೆ.ಜಿ ಗಾಂಜಾವನ್ನು ಪೊಲೀಸ್ ರು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ  ನೌಪಾಲ್

ಆರೋಪಿ ಮಹಮ್ಮದ್ ರಫೀಕ್

ಪೊಲೀಸರು ಶುಕವಾರ ಮದ್ದಡ್ಕದ ಚಿಲಿಂಬಿ ನಿವಾಸಿ ಮುಹಮ್ಮದ್ ರಫೀಕ್ (35) ಮತ್ತು ಆಲಂದಿಲ ನಿವಾಸಿ ನೌಫಲ್(25) ಬಂಧನಕ್ಕೊಳಗಾದವರು ರಾಷ್ಟ್ರೀಯ ಹೆದ್ದಾರಿಯ ಸಬರಬೈಲು ಎಂಬಲ್ಲಿ ಸಂಜೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮದ್ದಡ್ಕ ಕಡೆಯಿಂದ ಬೆಳ್ತಂಗಡಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರ ಬರುತ್ತಿದ್ದಾಗ ವಾಹನ ತಡೆದು ತಪಾಸಣೆ ನಡೆಸಿದ ವೇಳೆ ಗಾಂಜಾ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಸ್ಕೂಟರ್‌ನಲ್ಲಿ 1.5 ಕೆ.ಜಿ ಗಾಂಜಾ ಪತ್ತೆಯಾಗಿದೆ.
ಇದೀಗ ಬಂಧಿತ ಆರೋಪಿಗಳು ತಮಿಳುನಾಡಿನಿಂದ ಗಾಂಜಾ
ತರಿಸಿಕೊಂಡು ಅದನ್ನು ತಮ್ಮದೇ ನೆಟ್ವರ್ಕ್ ಮೂಲಕ ಆಯಕಟ್ಟಿನ ಸ್ಥಳಗಳಿಗೆ ರವಾನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ನಿಮ್ಮದೊಂದು ಉತ್ತರ