ಬೆಳ್ತಂಗಡಿ: ಉಜಿರೆ ಸಹನ ಐಸ್‌ಕ್ರೀಂ ಫ್ಯಾಕ್ಟರಿ ಯಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ನಾಗೇಶ್(65ವ ) ಎಂಬವರು ನಾಪತ್ತೆಯಾಗಿರುದಾಗಿ ಸೆ.11 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉಜಿರೆಯ ಸುರೇಂದ್ರ ನಾಯಕ್ ಎಂಬವರ ಪುತ್ರ ಸಮರ್ಥ ನಾಯಕ್ ಎಂಬವರ ಸಹನ ಐಸ್‌ಕ್ರೀಂ ಫ್ಯಾಕ್ಟರಿ ಯಲ್ಲಿ ಸುಮಾರು 15 ವರ್ಷಗಳಿಂದ ನಾಗೇಶ್ ಎಂಬವರು ಕೆಲಸ ಮಾಡುತ್ತಿದ್ದ ಕಳೆದ ಆಗಸ್ಟ್ 27 ರಂದು ಮಧ್ಯ ರಾತ್ರಿ 1.18 ಗಂಟೆಗೆ ಐಸ್‌ಕ್ರೀಂ ಫ್ಯಾಕ್ಟರಿಯ ಶೆಡ್ಡಿನಿಂದ ಹೊರಟು ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ, ಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಣೆಯಾದ ನಾಗೇಶ್ ರನ್ನು ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ದೂರು ನೀಡಲಾಗಿದೆ. ಬೆಳ್ತಂಗಡಿ ಠಾಣೆ ಯಲ್ಲಿ
ಸಂ:69/2021 ಕಲಂನಂತೆ ಕೇಸ್ ದಾಖಲಾಗಿದೆ.