ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳನಾಪತ್ತೆಯಾಗಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದೇಶದಲ್ಲಿ ಕೆಲಸಕ್ಕಿದ್ದ ರಾಜಿ ಜು.11ರಂದು ನೆರಿಯದ ನಾಯಿಕಟ್ಟೆ ಎಂಬಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆದರೆ ಆ. 26ರಂದು ರಾತ್ರಿ ಬಳಿಕ ಕಾಣೆಯಾಗಿದ್ದಾರೆ.ಲಭ್ಯ ಮಾಹಿತಿ ಪ್ರಕಾರ, ಆಕೆ ರಾತ್ರಿ ಎಂದಿನಂತೆ ಪತಿಯ ಜೊತೆ ಮಲಗಿದ್ದವರು 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳ ಜೊತೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು.
ಆದರೆ ಬೆಳಿಗ್ಗೆ ಐದು ಗಂಟೆಗೆ ಮಗಳು ಎದ್ದು ನೋಡುವ ವೇಳೆ ತಾಯಿ ತನ್ನ ಬಳಿಯೂ ಮಲಗಿರದೆ, ಮನೆಯಲೂ ಇಲ್ಲದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ರಾಜೀ -ಚಿದಾನಂದ ದಂಪತಿಗೆ 11 ವರ್ಷದ ಹೆಣ್ಣು ಮಗಳು, 10 ವರ್ಷದ ಗಂಡು ಮಗ ಇದ್ದಾರೆ. ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.
: