ಬೆಳ್ತಂಗಡಿ: ಕಳೆಂಜ ಗ್ರಾಮದ ಕುಡ್ತಲಾಜೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಂದಿ ಬೇಟೆ ನಡೆಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ಕೋವಿ ಹಾಗೂ ಸಜೀವ ಮದ್ದು ಗುಂಡು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಕಳಂಜ ಶಾಖೆಯ ಅರಣ್ಯಅಧಿಕಾರಿ ಮಧುಸೂಧನ ಅವರು ಆ.9 ರಂದು
ಅಪರಾಹ್ನ 1-30 ಗಂಟೆಗೆ ಕಳಂಜ ಗ್ರಾಮದ ಕುಡ್ತಲಾಜೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಕಳಂಜ ಶಾಖೆಯ ಅರಣ್ಯ ಅಧಿಕಾರಿಯಾದ ಪ್ರಶಾಂತ್ ಹಾಗೂ ಸಿಬ್ಬಂದಿಯವರು ಜೊತೆ ಗಸ್ತು ತಿರುಗುತ್ತಿದ್ದ ಸಮಯ ಗುಂಡಿನ ಶಬ್ಧಕೇಳಿ ಬಂದಕಡೆ ಹೋದಾಗ ಸುಜಯ್ ಗೌಡ ಎಂಬಾತನು ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡಿದ್ದು, ಸಮವಸ್ತ್ರದಲ್ಲಿ ಇದ್ದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೋಡಿ ಕೋವಿ ಹಾಗೂ ಮದ್ದು ಗುಂಡುಗಳನ್ನು ಅಲ್ಲೇ ಬಿಸಾಡಿ ಓಡಿತಪ್ಪಿಸಿಕೊಂಡನೆನ್ನಲಾಗಿದೆ .
ಪ್ರಶಾಂತ ರವರು ಸ್ಥಳವನ್ನು ಪರಶೀಲಿಸಿ
ದಾಗ ಕಾಡು ಹಂದಿ ನೆಲದಲ್ಲಿ ಸತ್ತು ಬಿದ್ದಿದ್ದು ಅದರ ಮೈ ಮೇಲೆ ಗುಂಡು ತಗುಲಿ ಗಾಯ ಉಂಟಾಗಿರುವುದು ಪತ್ತೆಯಾಗಿದೆ.
ಸ್ವಲ್ಪ ದೂರದಲ್ಲಿ ಎಸ್‌ಬಿಬಿಎಲ್ ಕೋವಿ ಹಾಗೂ 3 ಸಜೀವ ಮದ್ದುಗುಂಡು ದೊರೆತಿದೆ. ಸದ್ರಿ ಕೋವಿ ಹಾಗೂ ಮದ್ದುಗುಂಡು
ನ್ನು ಆರೋಪಿಯು ಸ್ಥಳದಲ್ಲಿ ಬಿಸಾಡಿ ಓಡಿ ಹೋಗಿದ್ದು ಅವುಗಳನ್ನು ವಶಪಡಿಸಿಕೊಳ್ಳ
ಲಾಗಿದೆ ಈ ಬಗ್ಗೆ ಉಪ್ಪಿನಂಗಡಿ ವಲಯ ಕಛೇರಿಯಲ್ಲಿ ಅ ಕ್ರ 16/2021-22 ರಂತೆ ಪ್ರಕರಣ ದಾಖಲಾಗಿಸಿಕೊಂಡು,.ಸದ್ರಿ ಆರೋಪಿಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವರೇ ಎ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಬೆಳ್ತಂಗಡಿ ರವರ ಅನುಮತಿ ಪಡೆದುಕೊಂಡು ವನ್ಯ ಪ್ರಾಣಿ ಭೇಟೆಗೆ ಉಪಯೋಗಿಸಿದ ಎಸ್‌ಬಿಬಿಎಲ್ ಕೋವಿ ಹಾಗೂ 3 ಸಜೀವ ಮದ್ದುಗುಂಡು ಮತ್ತು ಉಪಯೋಗಿಸಿದ ಮದ್ದುಗುಂಡು-1 ನ್ನು ಪಿ ಎಸ್ ಐ ಧರ್ಮಸ್ಥಳ ಪೊಲೀಸ್ ಠಾಣಾ ಸುಪರ್ದಿಗೆ ನೀಡಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ರವರು ನೀಡಿರುವ ದೂರಿನಂತೆ ಠಾಣಾ ಅ ಕ್ರ 44/2021 ಕಲಂ; 3 ಜೊತೆಗೆ 25(1),(ಬಿ) 30 ಶಸ್ತ್ರಾಸ್ತ್ರ ಕಾಯ್ದೆ 1959 ರಂತೆ ಪ್ರಕರಣ ದಾಖಲಿಸಲಾಗಿದೆ.