ಬೆಳ್ತಂಗಡಿ : ದಾರಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಸ್ಪಶಿ೯ಸಿ ಕೂಲಿ ಕಾಮಿ೯ಕರೋವ೯ರು ಮೃತ ಪಟ್ಟ ಘಟನೆ ಆ.7ರಂದು ಪದ್ಮುಂಜದಲ್ಲಿ ನಡೆದಿದೆ.
ಕಣಿಯೂರು ಗ್ರಾಮದ ಪೊಯ್ಯ ನಿವಾಸಿ ನಾಣ್ಯಪ್ಪ ಪೂಜಾರಿ (55.ವ) ಎಂಬವರು ಈ ದುಘ೯ಘಟನೆಯಲ್ಲಿ ಮೃತಪಟ್ಟವರು.
ಆ.7 ರಂದು ಬೆಳಗ್ಗೆ 6.30 ಕ್ಕೆ ಅವರು ಉಪ್ಪಿನಂಗಡಿ ಕೋಳಿ ಅಂಗಡಿಗೆ ಕೂಲಿ ಕೆಲಸಕ್ಕೆಂದು ಹೋಗುವ ಸಂದರ್ಭ ದಾರಿ ಮಧ್ಯೆ ವಿದ್ಯುತ್ ವಯರ್ ತುಂಡಾಗಿ ಬಿದ್ದಿರುವುದು ಗಮನಿಸದೆ ತಂತಿ ಮೇಲೆ ಕಾಲು ತಗುಲಿ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆ ದಾರಿಯಲ್ಲಿ ಹೋಗುವವರು ಇದನ್ನು ನೋಡಿ ಮನೆಯವರಿಗೆ ವಿಷಯ ತಿಳಿಸಿದ್ದರು.
ಮೃತರು ಬಡ ಕೂಲಿ ಕಾರ್ಮಿಕರಾಗಿದ್ದು ಪತ್ನಿ ಕೇಶವತಿ, ಪುತ್ರಿ ದೀಕ್ಷಿತ, ಪುತ್ರರಾದ ದೀಕ್ಷಿತ್, ರಕ್ಷಿತ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಸ್ಥಳೀಯ ವಾರ್ಡ್ ಸದಸ್ಯ ಸೀತಾರಾಮ ಮಡಿವಾಳ, ಸುಮತಿ ಶೆಟ್ಟಿ, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.