ಕ್ರೈಂ ವಾರ್ತೆ

ಬೆಳ್ತಂಗಡಿಯ ಹೂವಿನ ವ್ಯಾಪಾರಿಯ ರೂ.4 ಲಕ್ಷ ಕಳ್ಳತನ

ಬೆಳ್ತಂಗಡಿ : ಹೂವಿನ ವ್ಯಾಪಾರಿಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿರಿಸಿದ್ದ 4 ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲಎಂಬಲ್ಲಿ ನಡೆದಿದೆ.

ಇಲ್ಲಿಯ ಪಕ್ಕಿದಕಲ ಸುರೇಶ್ ನಾಯ್ಕ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬೆಳ್ತಂಗಡಿಯ ಸಂತೆಕಟ್ಟೆಯ ಎಂ.ಎಚ್.ಪ್ಲವರ್ಸ್ ಅಂಗಡಿ ಮಾಲೀಕ ಕಾಶಿಪಟ್ಲ ನಿವಾಸಿ ಹೈದರಾಲಿ (30) ಅವರ    ಬಾಡಿಗೆ    ಮನೆಯಿಂದ ಈ ಬೃಹತ್ ಮೊತ್ತವನ್ನು ಕಳ್ಳತನ ಮಾಡಲಾಗಿದೆ.
ಬೆಳ್ತಂಗಡಿ ಸಂತೆಕಟ್ಟೆಯ ಎಂ.ಎಚ್.ಪ್ಲವರ್ಸ್ ಅಂಗಡಿ ಮಾಲೀಕ ಕಾಶಿಪಟ್ಲ ನಿವಾಸಿ ಹೈದರಾಲಿ ಅವರು    ಆ.3ರಂದು   4 ಲಕ್ಷ ರೂ.ವನ್ನು
ಹೂ ಖರೀದಿ ಮಾಡುವ ಸಲುವಾಗಿ ಪಕ್ಕಿದಕಲದ ತಮ್ಮ ಬಾಡಿಗೆ ಮನೆಯ ಕಪಾಟಿನ ಡ್ರಾಯರ್ ನಲ್ಲಿ   ಇಟ್ಟಿದ್ದರು ಎನ್ನಲಾಗಿದೆ.  ಅವರು ಮನೆಗೆ ಬೀಗ ಹಾಕಿ ಎಂದಿನಂತೆ ವ್ಯಾಪಾರಕ್ಕೆ ತೆರಳಿದ್ದರು. ವ್ಯಾಪಾರ ಮುಗಿಸಿ ತಮ್ಮ ಸ್ವಂತ ಮನೆಯಾದ ಕಾಶಿಪಟ್ಟಕ್ಕೆ ತೆರಳಿ ಉಳಿದುಕೊಂಡಿದ್ದರು. ಆ.6 ರಂದು ಬೆಳಗ್ಗೆ ಬಾಡಿಗೆ ಮನೆಗೆ ಬಂದು ಬೀಗ ತೆಗೆದಾಗ ಕಪಾಟಿನ ಬೀಗವನ್ನು ಯಾರೋ ಆಯುಧದಿಂದ ಬೀಗ ಸಮೇತ ಜಾರಿಸಿ ರೂ4 ಲಕ್ಷ ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ