ಕ್ರೈಂ ವಾರ್ತೆ

ನಾಪತ್ತೆಯಾಗಿದ್ದ ರೆಖ್ಯ ಗ್ರಾಮದ ಮಹಿಳೆಯ ಮೃತ ದೇಹ ಎಂಜಿರದಲ್ಲಿ ಪತ್ತೆ

ಬೆಳ್ತಂಗಡಿ: ತೋಟದಲ್ಲಿ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋಗಿ ನದಿಗೆ ಜಾರಿ ಬಿದ್ದು ,ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ಅವರ ಮನೆಯಿಂದ 1 ಕಿ.ಮೀ ದೂರದ ಎಂಜಿರ ಎಂಬಲ್ಲಿ ನದಿ ಬದಿಯಲ್ಲಿ ಆ.1 ರಂದು ಬೆಳಗ್ಗೆ ಪತ್ತೆ ಯಾಗಿದೆ.ರೆಖ್ಯ ಗ್ರಾಮದ ಉನ೯ಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶ್ರೀಮತಿ ಶಕುಂತಳಾ(57ವ ) ಅವರು
ಪಿತ್ತ ಖಾಯಿಲೆ ಇರುವ ಕಾರಣ ತಲೆ ಸುತ್ತುವಿಕೆ ಇದ್ದುದರಿಂದ ನಾಟಿ ಔಷಧಿಯಾಗಿ ನೆಲನೆಲ್ಲಿ ಯನ್ನು ಕಷಾಯವಾಗಿ ಸೇವಿಸಲು ಜು.31ರಂದು ಬೆಳಿಗ್ಗೆ ತೋಟಕ್ಕೆ ಹೋದವರು ನಂತರ ನಾಪತ್ತೆ ಯಾಗಿದ್ದರು.ಮನೆಯ ಹುಡುಕಾಡಿದಾಗ ತೋಟದ ಹೊಳೆಯ ಬದಿ ಚಪ್ಪಲಿ ಮತ್ತು ಕೋಡೆ ಪತ್ತೆ ಯಾಗಿತ್ತು.
ಶಕುಂತಲ ಅವರು ಆಕಸ್ಮಿಕವಾಗಿ ಕಾಲು
ಜಾರಿ ನದಿ ನೀರಿಗೆ ಬಿದ್ದು ಕಾಣೆಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಸುಂದರ ಗೌಡರು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಿದ್ದರು.
ಸ್ಥಳಕ್ಕೆ ಧಮ೯ಸ್ಥಳ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಪಿಲಿಕುಳದಿಂದ ಮುಳುಗುಗಾರರು ಬಂದು ಸಂಜೆ ತನಕ ಹುಡುಕಾಟ ನಡೆಸಿದ್ದು ಆ.1ರಂದು ಬೆಳಗ್ಗಿನಿಂದ ಶೋಧ ಕಾರ್ಯ ಮುಂದುವರಿಸಿದಾಗ ಮೃತದೇಹ ಎಂಜಿರ ಸಮೀಪ ನದಿ ಬದಿಯಲ್ಲಿ ಪತ್ತೆಯಾಗಿದೆ. ಧಮ  ೯ಸ್ಥಳ  ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ .

 

 

ನಿಮ್ಮದೊಂದು ಉತ್ತರ