ಕ್ರೈಂ ವಾರ್ತೆ

ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳ ಸಾಗಾಟ: ಇಬ್ಬರ ವಶ

ಧಮ೯ಸ್ಥಳ: ಮಹೇಂದ್ರ ಜಿತೋ ವಾಹನದಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣೆಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಧಮ೯ಸ್ಥಳ ಪೊಲೀಸರು ಪತ್ತೆ ಹಚ್ಚಿದ ಪ್ರಕರಣ ವರದಿಯಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಚಂದ್ರಶೇಖರ ಕೆ .ಹಾಗೂ ಸಿಬ್ಬಂದಿಯವರು ಜೂ.10ರಂದು ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕೆ.ಎ. 18 ಸಿ 0770 ನೇ ನೊಂದಣಿ ಸಂಖ್ಯೆಯ ಮಹೀಂದ್ರಾ ಜಿತೋ ವಾಹನವು ಚಿಕ್ಕಮಗಳೂರು ಕಡೆಯಿಂದ ಬರುತ್ತಿರುವುದನ್ನು ಗಮನಿಸಿ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದು ವಾಹನವನ್ನು ಪರಿಶೀಲಿಸಿದಾಗ ವಾಹನದ ಹಿಂಬದಿಯಲ್ಲಿ 2 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಜಾನುವಾರುಗಳನ್ನು ಸಾಗಟ ಮಾಡಲು ಪರವಾನಿಗೆಯ ಬಗ್ಗೆ ವಿಚಾರಿಸಲಾಗಿ ಆರೋಪಿಗಳು ಯಾವುದೇ ದಾಖಲಾತಿಗಳನ್ನು ನೀಡಿಲ್ಲ. ಜಾನುವಾರುಗಳನ್ನು ಆರೋಪಿಗಳು ಕೊಂದು ಮಾಂಸಮಾಡಿ ಅದರ ಮಾಂಸವನ್ನು ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡುವುದು ಕಂಡು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಟಿ.ಶಿವಣ್ಣ ಹಾಗೂ ಕೆ.ಪಿ ಸೋಮೇ ಗೌಡ ಎಂಬವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆದಿದೆ.

ನಿಮ್ಮದೊಂದು ಉತ್ತರ