* ಜೌಷಧಾಲಯದ ಶಟರ್ ಮುರಿದು ಒಳನುಗ್ಗಿದ ಕಳ್ಳರು
* ಅಂಗಡಿಯ ಗೋಡೆಕೊರೆದು ಒಳನುಗ್ಗಲು ಯತ್ನ
ಉಜಿರೆ: ಉಜಿರೆ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಆನಂದ ಆಚಾರ್ಯ ಅವರ ಮಾಲಕತ್ವದ ಶ್ರೀ ಶಾರದ ಜುವೆಲ್ಲರ್‍ಸ್‌ನಿಂದ ಕಳ್ಳತನಕ್ಕೆ ವಿಫಲ ಯತ್ನ ನಡೆದ ಘಟನೆ ಜೂ.9 ರಂದು ರಾತ್ರಿ ಸಂಭವಿಸಿದೆ.
ಉಜಿರೆ ಮುಖ್ಯ ಪೇಟೆಯಲ್ಲಿಯ ಸಂಜೀವರವರ ಮಾಲಕತ್ವದ ಶ್ರೀ ಧನ್ವಂತರಿ ಜೌಷಧಾಯದ ಶೆಟರ್‌ನ್ನು ಕಬ್ಬಿಣದ ರಾಡ್‌ನಿಂದ ಮೀಟಿ ಮೇಲೆತ್ತಿ ಅಂಗಡಿಯೊಳಗೆ ನುಗ್ಗಿದ್ದರು. ನಂತರ ಜೌಷಧಾಲಯದ ಗೋಡೆಯನ್ನು ಕೊರೆದು ಸಮೀಪದ ವಾಮನ ಬೆಂಡೆಯವರ ಮಾಲಕತ್ವದ ಶ್ರೀನಿಧಿ ಸ್ಟೋರ್‍ಸ್‌ನ ಗೋಡಾನ್‌ಗೆ ನುಗ್ಗಿದ್ದರು.
ಅಲ್ಲಿ ಗೋಡಾನ್‌ನ ಶೀಟನ್ನು ತೆಗೆದು ಶ್ರೀ ಶಾರದ ಜುವೆಲ್ಲರ್‍ಸ್‌ಗೆ ನುಗ್ಗಲು ಯತ್ನಿಸಿದ್ದರು. ಆದರೆ ಇದು ಸಾಧ್ಯವಾಗದಿದ್ದಾಗ ಜುವೆಲ್ಲರ್‍ಸ್‌ನ ಗೋಡೆಯನ್ನು ಕೊರೆಯಲು ಯತ್ನಿಸಿದ್ದರು.
ಆದರೆ ಜುವೆಲ್ಲರಿ ಮಾಲಕರು ತಮ್ಮ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗೆ ಕಬ್ಬಿಣದ ತಗಡನ್ನು ಅಳವಡಿಸಿರುವುದರಿಂದ ಕಳ್ಳರಿಗೆ ಗೋಡೆಯನ್ನು ಕೊರೆಯಲು ಸಾಧ್ಯವಾಗಿಲ್ಲ. ಆದರೂ ಗೋಡೆಯನ್ನು ಕೊರೆಯಲು ಬಹಳಷ್ಟು ಯತ್ನ ನಡೆಸಿ ವಿಫಲರಾಗಿ ಅಲ್ಲಿಂದ ಪುನಃ ಜೌಷಧಾಯಕ್ಕೆ ಬಂದು ಪರಾರಿಯಾಗಿದ್ದಾರೆ.
ಧನ್ವಂತರಿ ಜೌಷಧಾಯದ ಗೋಡೆ ಕೊರೆಯುವ ಸಂದರ್ಭ ಅಂಗಡಿಯೊಳಗಿದ್ದ ಸುಮಾರು ೫೦ ಜೌಷಧಿ ಬಾಟಲ್‌ಗಳು ಪುಡಿಯಾಗಿದ್ದು ಮಾಲಕ ಸಂಜೀವರಿಗೆ ಸಾವಿರಾರು ರೂ. ನಷ್ಟವಾಗಿದೆ.
ಆದರೆ ಶ್ರೀನಿಧಿ ಸ್ಟೋರ್‍ಸ್ ಗೋಡಾನ್‌ನಿಂದ ಯಾವುದೇ ವಸ್ತುವನ್ನು ಕಳ್ಳರು ಕಳ್ಳತನ ನಡೆಸಿಲ್ಲ. ಇದರಿಂದಾಗಿ ಕಳ್ಳರು ಚಿನ್ನಾಭರಣ ಕಳ್ಳತನ ಮಾಡುವ ಉದ್ದೇಶದಿಂದಲೇ ಬಂದಿದ್ದರೆಂದು ಸ್ವಷ್ಟವಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.