ಕ್ರೈಂ ವಾರ್ತೆ

ಧಮ೯ಸ್ಥಳದ ಸೇವಾ ಸಹಕಾರಿ ಸಂಘದ ಪಿಗ್ಮಿ ಸಂಗ್ರಹಕ ಜಗದೀಶ್ ರಾವ್ ಆತ್ಮಹತ್ಯೆ

ಬೆಳ್ತಂಗಡಿ: ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಜಗದೀಶ್ ರಾವ್(40ವ) ಧರ್ಮಸ್ಥಳದ ತನ್ನ ಮನೆಯ ಸಮೀಪವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿತ್ಯನಿಧಿ ಸಂಗ್ರಹದ ಜೊತೆಗೆ ಅವರು ಕನ್ಯಾಡಿ
ಯಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣೆ ಕೇಂದ್ರ ಕೂಡ ಹೊಂದಿದ್ದರು.ಮನೆಯ
ಪಕ್ಕದ ಶೆಡ್‌ನ ಮೇಛಾವಣಿ ಪಕ್ಕಾಸಿಗೆ ಅವರು ನೇಣಿಗೆ ಕೊರಳೊಡ್ಡಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂಬಂಧುವರ್ಗದವರನ್ನು ಅಗಲಿದ್ದಾರೆ.

ಧರ್ಮಸ್ಥಳಪೋಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ತನಿಖೆ ಆರಂಭವಾಗಿದೆ.
ಸದ್ರಿ ಬ್ಯಾಂಕಿನ ಸಿಇಒ ಅವರೂ ಕೂಡಇತ್ತೀಚೆಗೆ ಬ್ಯಾಂಕಿನಸಭಾಂಗಣದಒಳಗೆಯೇನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದಬೆನ್ನಿಗೇಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಯ ವಿರುದ್ಧವೇ ಆತ್ಮಹತ್ಯೆಗೆ ಪ್ರೇರಣೆ ನೀಡಿದಕೇಸುದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆ ಕೂಡ ನೀಡಿತ್ತು. ಈ ಮಧ್ಯೆ ಅಲ್ಪ ದಿನಗಳ ಅಂತರದಲ್ಲಿಮತ್ತೋರ್ವ ನೇಣುಬಿಗಿದುಕೊಂಡಿದ್ದು ಜನರ ಬಾಯಲ್ಲಿ ವಿಭಿನ್ನ ಚರ್ಚೆಗಳು ಆರಂಭವಾಗಿದೆ.
ಈ ಮಧ್ಯೆ ಜಗದೀಶ್ ಅವರು ಆರ್ಥಿಕ ಸಮಸ್ಯೆಎದುರಿಸುತ್ತಿದ್ದರುಎಂದೂಹೇಳಲಾಗುತ್ತಿದೆ.

ನಿಮ್ಮದೊಂದು ಉತ್ತರ