ಕ್ರೈಂ ವಾರ್ತೆ

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು : ಯುವಕಾಂಗ್ರೆಸ್‌ ಮುಖಂಡ ಅಭಿನಂದನ್ ಗಾಯ

ಬೆಳ್ತಂಗಡಿ : ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ , ಉದ್ಯಮಿ ಅಭಿನಂದನ್ ಹರೀಶ್ ಅವರುಚಲಾಯಿಸುತ್ತಿದ್ದ ಪಜಿರೋ ಕಾರು ಬೆಳ್ತಂಗಡಿ ತಾಲೂಕಿನ ಕುತ್ತೊಟ್ಟು ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಈ ವೇಳೆ ಅಭಿನಂದನ್ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯ ನಿವಾಸಿ ಸಂತೋಷ್ ಹೊಳ್ಳ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಅವರಿಗೆ ಮಾಹಿತಿ ನೀಡಿದ್ದು, ಅವರು ಮತ್ತು ಸಂಗಡಿಗರಾದ ಇಂಟಕ್ ಅಧ್ಯಕ್ಷ ನವೀನ್ ಗೌಡ, ರಾಜೇಶ್ ಭಟ್, ಧನುಷ್ ಸೇರಿ ಅಭಿನಂದನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿಮ್ಮದೊಂದು ಉತ್ತರ