ಪಿಲ್ಯ: ಪಿಲ್ಯ ದಲ್ಲಿ ಬೈಕ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾರಾಟ ಮಾಡುತ್ತಿರುವುದನ್ನು
ಬೆಳ್ತಂಗಡಿ ಅಬಕಾರಿ ಇಲಾಖೆಯವರು ಪತ್ತೆ ಹಚ್ಚಿದ ಘಟನೆ ಜೂ.10ರಂದು ಸಂಜೆ ವರದಿಯಾಗಿದೆ.
ದಾಳಿ ನಡೆಸುವ ವೇಳೆ ಆರೋಪಿ ಪರಾರಿಯಾಗಿದ್ದು,ಬೈಕ್ ನಲ್ಲಿ ಮಾರಾಟಕ್ಕೆ ತಂದಿದ್ದವಿವಿಧ ನಮೂನೆಯ ೧೫ .300ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ರೂ. 46 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್, ಬೆಳ್ತಂಗಡಿ ವಲಯ ಕಚೇರಿಯ ಅಬಕಾರಿ ಮುಖ್ಯ ಪೇದೆ ಸಯ್ಯದ್ ಶಬೀರ್ ಹಾಗೂ ಅಬಕಾರಿ ಪೇz ಯವರಾದ ಭೋಜ.ಕೆ, ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.