ಕ್ರೈಂ ವಾರ್ತೆ

ನಿಡ್ಲೆ ಕುದ್ರಾಯ ಬಳಿ ರೂ.5ಲಕ್ಷ ಮೌಲ್ಯದ ಅಕ್ರಮ ಮದ್ಯ ಪತ್ತೆ

ಬೆಳ್ತಂಗಡಿ :ಅಕ್ರಮವಾಗಿ ಮದ್ಯ ಸಾಗಾಟ
ಮಾಡುತ್ತಿದ್ದ ಟೊಯೋಟಾ ಕಂಪನಿಯ ಕ್ವಾಲೀಸ್ ವಾಹನವನ್ನು ತಡೆದು ಅಬಕಾರಿ ಪೊಲೀಸರು ಸುಮಾರು 5 ಲಕ್ಷ ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡ ಘಟನೆ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ನಡೆದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಡೌನ್ ಹೇರಲಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಹಿನ್ನೆಲೆ ತಾಲೂಕಿನಾದ್ಯಂತ ಪೊಲೀಸ್ ಇಲಾಖೆ ತಪಾಸಣೆ ನಡೆಸುತ್ತಿದ್ದು, ವಾಹನಗಳನ್ನು ತಪಾಸಣೆ ಮಾಡುವ ಸಮಯದಲ್ಲಿ ಟೊಯೋಟಾ ಕಂಪನಿಯ ಕ್ವಾಲೀಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 34,560ಲೀಟರ್ ಮದ್ಯ ಸಿಕ್ಕಿದೆ.
ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಶಿಬಾಜೆ ಗ್ರಾಮದ ಅಭಿಲಾಶ್, ಬಿನ್ ಅಬ್ರಾಮ್ ಎಂದು ಗುರುತಿಸಲಾಗಿದ್ದು, ವಾಹನದ ಮಾಲೀಕರು ಯಾರು ಎಂಬುದು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.
ಪ್ರಕರಣವನ್ನು ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕಿ ಸೌಮ್ಯಲತಾ.ಎನ್ ದಾಖಲು ಮಾಡಿಕೊಂಡಿದ್ದು, ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿಂದುಶ್ರೀ.ಪಿ, ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಶೋಭಾ.ಕೆ. ಬೆಳ್ತಂಗಡಿ ವಲಯ ಕಚೇರಿಯ ಅಬಕಾರಿ ಮುಖ್ಯ ಪೇದೆ ಸಯ್ಯದ್ ಶಬೀರ್ ಹಾಗೂ ಅಬಕಾರಿ ಪೇದೆಯವರಾದ ಭೋಜ.ಕೆ. ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಮತ್ತು ವಾಹನ ಚಾಲಕ ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ
ಭಾಗಿಯಾಗಿದ್ದಾರೆ.

ನಿಮ್ಮದೊಂದು ಉತ್ತರ