ಬೆಳ್ತಂಗಡಿ: ಅ.10 ಕರ್ನಾಟಕ ಸರಕಾರ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಪಡೆದ ತಾಲೂಕಿನ ಹೆಮ್ಮೆಯ ನೆಟ್ ಬಾಲ್ ಆಟಗಾರ ನಿತಿನ್ ಪೂಜಾರಿ ಅವರು ಶ್ರಮಿಕ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜರವರು ಅವರನ್ನು ಅಭಿನಂದಿಸಿ ,ಗೌರವಿಸಿದರು.
ತಣ್ಣಿರುಪಂತ ಶಕ್ತಿಕೇಂದ್ರ ಪ್ರಮುಖರಾದ ಮಹೇಶ್ ಜೆಂಕ್ಯಾರು, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು