*ಬಂದಾರು* : ಅ 8 ,9ರಂದು ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ 14 ನೇ ವಯೋಮಾನದ ಬಾಲಕಿಯರ ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸತತವಾಗಿ 10ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.
ಪೈನಲ್ ಪಂದ್ಯದಲ್ಲಿ ಬಲಿಷ್ಠ ಮಂಡ್ಯ ತಂಡವನ್ನು 25-12 25-10 ನೇರಾ ಸೆಟ್‌ಗಳಲ್ಲಿ ಮಣಿಸಿ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.