ಸಾಧಕರು

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ *ದೇವಿಪ್ರಸಾದ್ ಗೌಡ ಕಡಮ್ಮಾಜೆ* ಯವರಿಗೆ ಜಿಲ್ಲಾ ಸಾಧಕ ಪ್ರಶಸ್ತಿ ಗೌರವ

ಬೆಳ್ತಂಗಡಿ: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಲುವಾಗಿ ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿಂದ ಬಿ.ಸಿ ರೋಡ್ ವರೆಗೆ ವಿಕಾಸ್ ತೀರ್ಥ ಬೈಕ್ರ್ಯಾ ಲಿಯ ಸಮಾರೋಪ ಹಾಗೂ ಜಿಲ್ಲಾ ಮಟ್ಟದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿಸಾವಯವಕೃಷಿಕ,ಕೋಳಿಸಾಕಣೆ,ಹೈನುಗಾರಿಕೆ, ಮೀನುಸಾಕಾಣೆ,ಪ್ರಾಣಿ ಪಕ್ಷಿಗಳ ಸಾಕಾಣೆ,ಹಣ್ಣು ಹಂಪಲು ಗಿಡಗಳ ಪೋಷಣೆ, ಕೃಷಿ,ಉದ್ಯಮ ಕ್ಷೇತ್ರದಲ್ಲಿಸಾಧನೆಗೈದ ದೇವಿಪ್ರಸಾದ್ ಗೌಡಕಡಮ್ಮಾಜೆ* ಇವರಿಗೆ ಜಿಲ್ಲಾ ಸಾಧಕ ಸನ್ಮಾನ ಕಾರ್ಯಕ್ರಮ ನೆರವೇರಿತು.

ಬಿಜೆಪಿ ರಾಜ್ಯಾಧ್ಯಕ್ಷರು,ಸಂಸದರಾದ ನಳಿನ್ ಕುಮಾರ್ ಕಟೀಲ್,ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್,ಜಿಲ್ಲಾಧ್ಯಕ್ಷರಾದ ಸುದ ರ್ಶನ್ ಮೂಡಬಿದ್ರೆ , ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಯುವಮೋರ್ಚಾ‌ ಜಿಲ್ಲಾಧ್ಯಕ್ಷರಾದ ಗುರುದತ್ ಕಾಮತ್,ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ ‌ಗೌಡ ಬೆಳಾಲು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ